ಆದರೆ ರಾಜನು ತನ್ನ ಭೂಮಿಯ ಒಂದು ಭಾಗವನ್ನು ತನ್ನ ಸೇವಕರಲ್ಲಿ ಒಬ್ಬನಿಗೆ ದಾನಮಾಡಿದರೆ, ಬಿಡುಗಡೆಯ ವರ್ಷದವರೆಗೆ ಅದು ಅವನ ಅಧೀನವಾಗಿರುವುದು; ಆಮೇಲೆ ಅದು ಪುನಃ ರಾಜನ ವಶವಾಗುವುದು. ಆದರೆ ರಾಜನು ತನ್ನ ಮಕ್ಕಳಿಗೆ ಕೊಟ್ಟ ಸೊತ್ತು ಅವರಿಗೇ ಸೇರಿಬಿಡುವುದು.