ಮತ್ತು ಸರ್ವೇಶ್ವರನ ಮುಂದೆ ಸಭೆ ನೆರೆದಾಗ ಅದಕ್ಕೆ ಬಾರದೆ ಇದ್ದಂಥ ಇಸ್ರಯೇಲರು ಯಾರಾರೆಂದು ವಿಚಾರಮಾಡಿದರು. ಏಕೆಂದರೆ ಮಿಚ್ಫೆಯಲ್ಲಿ, “ಸರ್ವೇಶ್ವರನ ಸನ್ನಿಧಿಗೆ ಬಾರದವರನ್ನು ಕೊಂದುಹಾಕುವೆವೆಂದು ಆಣೆಯಿಟ್ಟು ಅವರು ದೃಢಪ್ರಮಾಣ ಮಾಡಿದ್ದರು.