ಸೌಲನ ಮಗ ಯೋನಾತಾನನಿಗೆ ಮೆಫೀಬೋಶೆತನೆಂಬ ಒಬ್ಬ ಕುಂಟ ಮಗನಿದ್ದನು. ಅವನು ಕುಂಟನಾದದ್ದು ಹೀಗೆ: ಸೌಲ ಹಾಗು ಯೋನಾತಾನರು ಸತ್ತರೆಂಬ ವರ್ತಮಾನ ಜೆಸ್ರೀಲಿನಿಂದ ಬಂದಾಗ ಐದು ವರ್ಷದವನಾಗಿದ್ದ ಅವನನ್ನು ಅವನ ದಾದಿ ತೆಗೆದುಕೊಂಡು ಅವಸರದಿಂದ ಓಡಿಹೋಗುವಾಗ ಅವನು ಬಿದ್ದು ಕಾಲು ಮುರಿದುಕೊಂಡನು.