ಸೌಲನೂ ಬೆನ್ಯಾಮೀನ್ ಗೋತ್ರಕ್ಕೆ ಸೇರಿದವನೇ. ದಾವೀದನನ್ನು ಹಿಂಬಾಲಿಸಿದವರು ಎಡಗೈಯಿಂದಾಗಲೀ ಬಲಗೈಯಿಂದಾಗಲೀ ಬಾಣಗಳನ್ನೆಸೆಯುವವರೂ ಕವಣೆಗಳಲ್ಲಿ ಕಲ್ಲುಗಳನ್ನಿಟ್ಟು ಎಸೆಯಲು ಶಕ್ತರೂ ಆಗಿದ್ದರು.