ಅವರು ಗಿಬೇಯದ ಶೇಮಾನ ಮಕ್ಕಳಾದ ಅಹೀಯೆಜೆರ್ ಮತ್ತು ಯೋವಾಷ ಎಂಬವರ ನೇತೃತ್ವದಲ್ಲಿ ಇದ್ದರು. ಆ ಸೈನಿಕರ ಹೆಸರುಗಳು :- ಯೇಜೀಯೇಲ್ ಮತ್ತು ಪೆಲೆಟ - ಅಜ್ಮಾವೆತನ ಮಕ್ಕಳು. ಯೇಹು ಮತ್ತು ಬೆರಾಕ - ಅನತೋತ ಊರಿನವರು. ಇಷ್ಮಾಯ - ಗಿಬ್ಯೋನಿನವನು; ಪ್ರಸಿದ್ಧನಾದ ಸೈನಿಕ, ‘ಮೂವತ್ತು ಪ್ರಮುಖರ’ ಪಟಾಲಮಿನಲ್ಲಿ ಒಬ್ಬ. ಯೆರೆಮೀಯ, ಯಹಜೀಯೇಲ್, ಯೋಹಾನಾನ್, ಯೋಜಾಬಾದ್ - ಗೆದೇರಾ ಊರಿನವರು. ಎಲ್ಲೂಜೈ, ಯೆರೀಮೋತ್, ಬೆಯಲ್ಯ, ಶೆಮರ್ಯ, ಶೆಫಟ್ಯ - ಇವರು ಹರೀಫ್ಯದವರು. ಎಲ್ಕಾನ, ಇಷೀಯ, ಅಜರೇಲ್, ಯೋವೆಜೆರ್ ಮತ್ತು ಯಾಷೊಬ್ಬಮ - ಇವರು ಕೋರಹನ ಗೋತ್ರದವರು. ಯೋವೇಲ ಮತ್ತು ಜೆಬದ್ಯ - ಗೆದೋರಿನ ಯೆರೋಹಾಮನ ಮಕ್ಕಳು.
Go to Home Page