ಅರ್ವಾದಿನವರೂ ನಿನ್ನ ಸೈನಿಕರೂ ಸುತ್ತುಮುತ್ತಲು ನಿನ್ನ ತೆನೆಗೋಡೆಗಳಲ್ಲಿ ನಿಂತಿದ್ದರು; ಗಮ್ಮಾದ್ಯರು ನಿನ್ನ ಕೊತ್ತಲಗಳಲ್ಲಿ ಕಾವಲಾಗಿದ್ದರು; ಎಲ್ಲರು ತಮ್ಮ ಖೇಡ್ಯಗಳನ್ನು ಸುತ್ತಮುತ್ತಲು ನಿನ್ನ ಗೋಡೆಗಳಿಗೆ ನೇತುಹಾಕಿ ನಿನ್ನ ಸೌಂದರ್ಯವನ್ನು ಪರಿಪೂರ್ಣಗೊಳಿಸಿದ್ದರು.