ದಕ್ಷಿಣದಿಂದ ತೆಳುಗಾಳಿ ಬೀಸಲಾರಂಭಿಸಿತು. ಪ್ರಯಾಣಿಕರು ತಮ್ಮ ಉದ್ದೇಶ ಕೈಗೂಡಿತೆಂದು ಭಾವಿಸಿದರು. ಅವರು ಹಡಗಿನ ಲಂಗರುಗಳನ್ನು ಎತ್ತಿ, ಕ್ರೇಟ್ ದ್ವೀಪವನ್ನು ಅನುಸರಿಸುತ್ತಾ, ತೀರದ ಮಗ್ಗುಲಲ್ಲೇ ಪ್ರಯಾಣ ಹೊರಟರು.