ಇಷ್ಮಾಯೇಲ್ಯರು ಹವೀಲ ಹಾಗು ಶೂರಿನ ಮಧ್ಯೆಯಿರುವ ಪ್ರದೇಶದಲ್ಲಿ ವಾಸಮಾಡಿದರು. ಶೂರ್ ಈಜಿಪ್ಟಿನ ಪೂರ್ವಕ್ಕೆ ಅಸ್ಸೀರಿಯಗೆ ಹೋಗುವ ಹಾದಿಯಲ್ಲಿದೆ. ಹೀಗೆ ಇಷ್ಮಾಯೇಲ್ಯರು ತಮ್ಮ ಸಂಬಂಧಿಕರಿಗೆ ಎದುರುಬದುರಿನಲ್ಲೇ ವಾಸಮಾಡಿದರು.