ಸರ್ವೇಶ್ವರನ ಆಜ್ಞೆಯ ಪ್ರಕಾರ ಅವರು ತಮ್ಮ ಡೇರೆಗಳನ್ನು ಹಾಕಿಕೊಳ್ಳುತ್ತಿದ್ದರು. ಸರ್ವೇಶ್ವರನ ಆಜ್ಞೆಯ ಪ್ರಕಾರವೇ ಡೇರೆಗಳನ್ನು ಕಿತ್ತು ಹೊರಡುತ್ತಿದ್ದರು. ಮೋಶೆಯ ಮುಖಾಂತರ ಸರ್ವೇಶ್ವರ ಆಜ್ಞಾಪಿಸಿದಂತೆಯೇ ಅವನು ಸರ್ವೇಶ್ವರನ ಸೂಚನೆಗಳನ್ನು ಅನುಸರಿಸಿ ನಡೆಯುತ್ತಿದ್ದರು.