ಅದನ್ನು ನೀವು ಯಾಜಕ ಎಲ್ಲಾಜಾರನ ಕೈಗೆ ಒಪ್ಪಿಸಬೇಕು. ಆತ ಅದನ್ನು ಪಾಳೆಯದ ಹೊರಗೆ ಹೊಡೆಸಿಕೊಂಡು ಹೋಗಿ ತನಗೆದುರಾಗಿಯೇ ಒಬ್ಬನ ಕೈಯಿಂದ ವಧೆ ಮಾಡಿಸಬೇಕು.