ಅಬೀಮೆಲೆಕನ ತರುವಾಯ ಇಸ್ಸಾಕಾರ್ ಕುಲದ ಪೂವನ ಮಗನೂ ದೋದೋವಿನ ಮೊಮ್ಮಗನೂ ಆಗಿದ್ದ ತೋಲನು ಎದ್ದು ಇಸ್ರಯೇಲರನ್ನು ಕಾಪಾಡಿದನು. ಅವನು ಎಫ್ರಯಿಮ್ ಮಲೆನಾಡಿನ ಶಾಮೀರವೆಂಬ ಊರಲ್ಲಿ ವಾಸವಾಗಿದ್ದನು.