ಆ ಬಂಡಿ ಬೇತ್‍ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿದ್ದ ಒಂದು ದೊಡ್ಡ ಕಲ್ಲಿನ ಬಳಿ ಬಂದು ನಿಂತಿತು. ಅವರು ಅಲ್ಲಿಗೆ ಹೋಗಿ, ಬಂಡಿಯ ಕಟ್ಟಿಗೆಗಳನ್ನು ಮುರಿದು, ಅಗ್ನಿ ಮಾಡಿ ಆ ಹಸುಗಳನ್ನು ಸರ್ವೇಶ್ವರನಿಗೆ ದಹನಬಲಿಯಾಗಿ ಅರ್ಪಿಸಿದರು.