ತರುವಾಯ ಅವರೆಲ್ಲರು ಅವನನ್ನು ಹಿಂಬಾಲಿಸಿ, ಕೊಳಲೂದುತ್ತಾ ಹರ್ಷಾನಂದದಿಂದ ಆರ್ಭಟಿಸುತ್ತಾ, ಹಿಂದಿರುಗಿ ಬಂದರು. ಅವರ ಜಯಕಾರದ ಕೂಗು ಭೂಮಿಯನ್ನೇ ನಡುಗಿಸುವಂತಿತ್ತು!