ರೂಬೇನ್, ಗಾದ್ ಮತ್ತು ಪೂರ್ವದಲ್ಲಿಯ ಮನಸ್ಸೆ ಕುಲಗಳಲ್ಲಿ ನಲವತ್ತನಾಲ್ಕು ಸಾವಿರದ ಏಳುನೂರ ಅರವತ್ತು ಮಂದಿ ಸೈನಿಕರು ಇದ್ದರು. ಅವರು ಗುರಾಣಿಗಳನ್ನೂ ಖಡ್ಗಗಳನ್ನೂ ಬಿಲ್ಲುಬಾಣಗಳನ್ನೂ ಉಪಯೋಗಿಸುವುದರಲ್ಲಿ ಉತ್ತಮ ತರಬೇತಿ ಹೊಂದಿದ್ದರು.