ಜೆರುಸಲೇಮಿನಲ್ಲಿ ಯೆಹೂದನ ಗೋತ್ರದ ಆರುನೂರ ತೊಂಬತ್ತು ಕುಟುಂಬಗಳು ನೆಲಸಿದವು. ಯೆಹೂದನ ಮಗ ಪೆರೆಚನ ಸಂತತಿಯವರಿಗೆ ಅಮ್ಮೀಹೂದನ ಮಗನೂ ಒಮ್ರಿಯ ಮೊಮ್ಮಗನೂ ಆದ ಊತೈ ನಾಯಕನಾಗಿದ್ದನು. ಇಮ್ರಿ ಮತ್ತು ಬಾನಿ ಎಂಬವರು ಅವನ ಪೂರ್ವಜರಲ್ಲಿ ಇಬ್ಬರು. ಯೆಹೂದನ ಮಗ ಶೇಲಾಹನ ಸಂತಾನದವರಿಗೆ ಆಸಾಯನು ನಾಯಕ ಹಾಗೂ ಗೋತ್ರದ ಮುಖ್ಯಸ್ಥನಾಗಿದ್ದನು. ಯೆಹೂದನ ಮಗ ಜೆರಹನ ಸಂತತಿಯವರಿಗೆ ಯೆಯೂವೇಲ್ ನಾಯಕನಾಗಿದ್ದನು.
Go to Home Page