ಏಕೆಂದರೆ ಅವನು ಆರಹನ ಮಗ ಶೆಕನ್ಯನ ಅಳಿಯನಾಗಿದ್ದ ಹಾಗು ಯೆಹೋಹಾನಾನನೆಂಬ ಅವನ ಮಗ ಬೆರೆಕ್ಯನ ಮಗನಾದ ಮೆಷುಲ್ಲಾಮನ ಮಗಳನ್ನು ಮದುವೆಮಾಡಿಕೊಂಡಿದ್ದ. ಆದ್ದರಿಂದ ಯೆಹೂದ್ಯರಲ್ಲಿ ಅನೇಕರು ಅವನಿಗೆ ಪ್ರಮಾಣಮಾಡಿ ಅವನ ಪಕ್ಷದವರಾಗಿದ್ದರು.