ಇಲ್ಲಿ ಅವನು ಮೂರು ತಿಂಗಳು ಕಳೆದನು. ಬಳಿಕ ಸಿರಿಯಕ್ಕೆ ನೌಕಾಯಾನ ಮಾಡಲು ಸಿದ್ಧನಾಗುತ್ತಿದ್ದಾಗ , ಯೆಹೂದ್ಯರು ಅವನ ವಿರುದ್ಧ ಒಳಸಂಚು ಮಾಡುತ್ತಿರುವುದಾಗಿ ತಿಳಿದುಬಂದಿತು. ಆದುದರಿಂದ ಅವನು ಮಕೆದೋನಿಯದ ಮಾರ್ಗವಾಗಿ ಹಿಂದಿರುಗಲು ನಿರ್ಧರಿಸಿದನು.