ಅಲ್ಲಿನ ಪ್ರವಾದಿಮಂಡಲಿಯವರು ಎಲೀಷನನ್ನು ಭೇಟಿಯಾಗಿ, “ಸರ್ವೇಶ್ವರ ಈ ದಿನ ನಿಮ್ಮ ಗುರುವನ್ನು ನಿಮ್ಮ ಬಳಿಯಿಂದ ಮೇಲಕ್ಕೆ ತೆಗೆದುಕೊಳ್ಳುವರು ಎಂಬುದು ನಿಮಗೆ ತಿಳಿದಿದೆಯೊ?” ಎಂದು ಕೇಳಿದರು. ಅದಕ್ಕೆ ಅವನು, “ತಿಳಿದಿದೆ; ಆದರೆ ನೀವು ಸುಮ್ಮನಿರಿ,” ಎಂದು ಉತ್ತರಿಸಿದನು.