ಯಾಜಕನಾದ ಯೆಹೋಯಾದಾವನು ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು ಬಂದು, ಅದರ ಮುಚ್ಚಳದಲ್ಲಿ ತೂತುಮಾಡಿ, ಅದನ್ನು ಸರ್ವೇಶ್ವರನ ಆಲಯದ ಬಾಗಿಲಿನ ಬಲಗಡೆಯಲ್ಲಿ, ಬಲಿಪೀಠದ ಹತ್ತಿರ ಇಟ್ಟನು. ದ್ವಾರಪಾಲಕರಾದ ಯಾಜಕರು ಸರ್ವೇಶ್ವರನ ಆಲಯಕ್ಕೆ ತರಲಾದ ಹಣವನ್ನೆಲ್ಲಾ ಅದರಲ್ಲಿಯೇ ಹಾಕಿಸುತ್ತಿದ್ದರು.