ಅರಸನೂ ಯೆಹೋಯಾದನೂ ಅದನ್ನು ಸರ್ವೇಶ್ವರನ ಆಲಯದ ಕೆಲಸವನ್ನು ನಡೆಸುವವರಿಗೆ ಒಪ್ಪಿಸಿದರು. ಇವರು ಸರ್ವೇಶ್ವರನ ಆಲಯದ ದುರಸ್ತಿ ಕೆಲಸಕ್ಕಾಗಿ, ಶಿಲ್ಪಿಗಾರರನ್ನೂ ಬಡಗಿಯರನ್ನೂ ಅದನ್ನು ಭದ್ರಪಡಿಸುವುದಕ್ಕಾಗಿ ಕಮ್ಮಾರರನ್ನೂ ಕಂಚುಗಾರರನ್ನೂ ಹಚ್ಚಿದರು.