ಸರ್ವಶಕ್ತ ಸರ್ವೇಶ್ವರನ ಸಂದೇಶವಿದು - ಕುಂಬಾರ ಮಾಡಿದ ಮಣ್ಣಿನ ಮಡಕೆಯನ್ನು ಒಡೆದುಹಾಕಿದ ಮೇಲೆ ಸರಿಪಡಿಸಲಾಗದು. ಅಂತೆಯೇ ನಾನು ಈ ಜನರನ್ನು ಹಾಗು ನಗರವನ್ನು ಒಡೆದುಹಾಕುವೆನು. ಹೂಣಲು ಇನ್ನೆಲ್ಲಿಯೂ ಸ್ಥಳವಿಲ್ಲವಾಗಿ ಹೆಣಗಳನ್ನು ಈ ತೋಫೆತಿನಲ್ಲೇ ಹೂಣುವರು.